ಬೆಂಗಳೂರು, ಡಿಸೆಂಬರ್ 8 : ಕರ್ನಾಟಕದಲ್ಲಿ ಮುಂಬರುವ 2018ರ ವಿಧಾಸಬಾ ಚುನಾವಣೆಗೆ ಕಾಪ್ಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ನಂತರ ಕನ್ನಡಪ್ರಭ, ಸುವರ್ಣ ನ್ಯೂಸ್ ಹಾಗೂ ಎಝಡ್ ರಿಸರ್ಚ್ ಮತದಾನ ಪೂರ್ವ ಸಮೀಕ್ಷೆ ವರದಿಯನ್ನು ಪ್ರಕಟಿಸಿದೆ.ಎಝಡ್ ರಿಸರ್ಚ್ ಮತದಾನ ಪೂರ್ವ ಸಮೀಕ್ಷೆಯಂತೆ 2018ರ ವಿಧಾನಸಬಾ ಚುನಾವಣೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲ. ಮತ್ತೆ ದೋಸ್ತಿ ಸರ್ಕಾರ ಅನಿವಾರ್ಯವಾಗಲಿದೆ. ಆದರೆ, ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ಸಮೀಕ್ಷೆ ತಿಳಿಸಿದೆ.ಆಡಳಿತ ರೂಢ ಕಾಂಗ್ರೆಸ್ 88 (ಸರಿಸುಮಾರು 74 ರಿಂದ 93) ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 80 (ಸರಿಸುಮಾರು 77-92) ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಜೆಡಿಎಸ್ ಪಕ್ಕ 43 (ಸರಿಸುಮಾರು 41-46) ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಕಿಂಗ್ ಮೇಕರ್ ಆಗಲಿದೆ.ಇತರರು ಅಂದರೆ ಪಕ್ಷೇತರರು 11 ಸ್ಥಾನದಲ್ಲಿ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.ಬಿಜೆಪಿ-ಕಾಂಗ್ರೆಸ್ ಹಾಗೂ ಜೆಡಿಎಸ್ ಭಾರಿ ರಣತಂತ್ರ ಹೆಣೆಯುತ್ತಿರುವ ಸಂದರ್ಭದಲ್ಲಿ ಎಝಡ್ ರಿಸರ್ಚ್ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ಭಾರಿ ಸಂಚಲನ ಮೂಡಿಸುತ್ತಿದೆ.ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ 122 ಸ್ಥಾನಗಳಲ್ಲಿ ಗೆದ್ದು ಯಾರ ಬೆಂಬಲವಿಲ್ಲದೆ ಸ್ವಂತ ಬಲದಿಂದ ಆಡಳಿತಕ್ಕೆ ಬಂದಿದ್ದ ಕಾಂಗ್ರೆಸ್ ಗೆ ಈ ಬಾರಿಯ ಅಂದರೆ 2018ರ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ 34 ಸ್ಥಾನಗಳು ನಷ್ಟ ಅನುಭವಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.
Karnataka Assembly Elections 2018: Suvarna news, Kannada Prabha and AZ opinion poll predicts that no one party came to power. JDS king maker .